ಸುದ್ದಿ: ಭಾರತ ಹಾಗೂ ಓಮನ್ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಲ್ತಾನರ ವಿಶಿಷ್ಟ ನಾಗರಿಕ ಗೌರವವಾದ ‘ಆರ್ಡರ್ ಆಫ್ ಒಮಾನ್’ ಅನ್ನು ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರದಾನ ಮಾಡಿದ್ದಾರೆ.
ಇದರೊಂದಿಗೆ ಪ್ರಧಾನಿ ಮೋದಿಗೆ ಒಟ್ಟು 29 ಅಂತಾರಾಷ್ಟ್ರೀಯ ಗೌರವಗಳು ಸಿಕ್ಕಂತಾಗಿದೆ.
ಏನಿದು ಗ್ರೇಟ್ ಆರ್ಡರ್ ಆಫ್ ಓಮನ್?
ಗ್ರೇಟ್ ಆರ್ಡರ್ ಆಫ್ ಓಮನ್ ಎಂಬುದು ಒಮಾನ್ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು, ರಾಜಮನೆತನದ ಉನ್ನತ ಸದಸ್ಯರು ಮತ್ತು ಒಮಾನ್ ದೇಶದ ಸಂಬಂಧಗಳನ್ನು ಬಲಪಡಿಸುವ ಗಣ್ಯರಿಗೆ ಸುಲ್ತಾನ್ ನೀಡುವ ಶ್ರೇಷ್ಠ ಪ್ರಶಸ್ತಿಯಾಗಿದೆ. ಇದನ್ನು ಸುಲ್ತಾನ್ ಕಬೂಸ್ ಬಿನ್ ಸೈದ್ ಅವರು 1970ರಲ್ಲಿ ಸ್ಥಾಪಿಸಿದರು ಮತ್ತು ಇದು ಪ್ರಸ್ತುತ ಒಮಾನ್‌ನ ಅತ್ಯುನ್ನತ ಗೌರವವಾಗಿದೆ.
ನಿಮಗಿದು ತಿಳಿದಿರಲಿ !
ಇಥಿಯೋಪಿಯಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವವಾದ "ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ" ಪ್ರಶಸ್ತಿಯನ್ನು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿದ್ದಾರೆ.