ಭಾರತವು, ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ಈ ಮೂಲಕ ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಭಾರತ ಮೀರಿಸಿದೆ' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
2024-25ರ ಬೆಳೆ ವರ್ಷದಲ್ಲಿ ಭಾರತವು 15.01 ಕೋಟಿ ಟನ್ ಅಕ್ಕಿ ಉತ್ಪಾದನೆ ಮಾಡಿದೆ, ಚೀನಾ ದೇಶವು 14.52 ಕೋಟಿ ಟನ್ ಉತ್ಪಾದನೆ ಮಾಡಿದೆ.
25 ಬೆಳೆಗಳ 184 ಹೊಸ ಸುಧಾರಿತ ತಳಿಗಳು :
ಈ ತಳಿಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಕೇಂದ್ರ ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಖಾಸಗಿ ಬಿತ್ತನೆ ಬೀಜ ಕಂಪನಿಗಳು ಅಭಿವೃದ್ಧಿಪಡಿಸಿವೆ.
1969ರಿಂದ 2014ರ ನಡುವೆ ಅಧಿಕ ಇಳುವರಿ ನೀಡುವ 3,969 ತಳಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕ ಇಳುವರಿ ನೀಡುವ 3,236 ತಳಿಗಳಿಗೆ ಅನುಮೋದನೆ ನೀಡಿದೆ.
ಭಾರತದ ಭತ್ತವನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳು:
1) ಪಶ್ಚಿಮ ಬಂಗಾಳ
2) ಉತ್ತರ ಪ್ರದೇಶ
3) ಆಂಧ್ರಪ್ರದೇಶ
4) ಪಂಜಾಬ್