News : ಭಾರತ ಸರ್ಕಾರ ಎಲ್ಲ ರಾಜ್ಯಗಳಿಂದ 2025 ಡಿಸೆಂಬರ್ ತಿಂಗಳಿನ ಸರಕು ಸೇವಾ ತೆರಿಗೆ (GST) ಸಂಗ್ರಹಿಸಿದ್ದ ಮಾಹಿತಿ ಹೊರ ಬಿದ್ದಿದೆ. ಇದರಲ್ಲಿ ಅತ್ಯಧಿಕ ತೆರಿಗೆಯನ್ನು ಕೇಂದ್ರಕ್ಕೆ ನೀಡುವ ಪೈಕಿ ಕರ್ನಾಟಕ ಎಂದಿನಂತೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಪ್ರಥಮ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.
ರಾಜ್ಯಗಳಿಂದ ಕೇಂದ್ರ ಸಂಗ್ರಹಿಸಿದ ಸರಕು ಸೇವಾ ತೆರಿಗೆಯಲ್ಲಿ ಈ ಬಾರಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ. ಭಾರತದ ಜಿಎಸ್‌ಟಿ ಸಂಗ್ರಹವು ಡಿಸೆಂಬರ್ 2025 ರಲ್ಲಿ ಶೇಕಡಾ 6.1 ರಷ್ಟು ಹೆಚ್ಚಳವಾಗಿದೆ. ಅಂದರೆ 1,74,550 ಕೋಟಿ ರೂ.ಗಳಿಗೆ ಜಿಎಸ್‌ಟಿ ಸಂಗ್ರಹ ತಲುಪಿದ್ದು, ಹಿಂದಿನ ವರ್ಷದ (2024 ಡಿಸೆಂಬರ್) ಇದೇ ತಿಂಗಳಿನಲ್ಲಿ ಇದು 1,64,556 ಕೋಟಿ ರೂ.ಗಳಷ್ಟಿತ್ತು ಎಂದು ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ಮಾಹಿತಿ ನೀಡಿವೆ.
ರಾಜ್ಯವಾರು ಜಿಎಸ್‌ಟಿ ಸಂಗ್ರಹವಾದ ಪಟ್ಟಿ
ಮಹಾರಾಷ್ಟ್ರ : 16,140 ಕೋಟಿ ರೂಪಾಯಿ
ಕರ್ನಾಟಕ : 6,716 ಕೋಟಿ ರೂಪಾಯಿ
ಉತ್ತರ ಪ್ರದೇಶ : 6,671 ಕೋಟಿ ರೂಪಾಯಿ
ಗುಜರಾತ್ : 6,351 ಕೋಟಿ ರೂಪಾಯಿ
ತಮಿಳುನಾಡು : 5,992 ಕೋಟಿ ರೂಪಾಯಿ
ಪಶ್ಚಿಮ ಬಂಗಾಳ : 3,559 ಕೋಟಿ ರೂಪಾಯಿ