ಸುದ್ದಿ: ಇಥಿಯೋಪಿಯಾ (Ethiopia) ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವವಾದ "ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ" (The Great Honor Nishan of Ethiopia) ಪ್ರಶಸ್ತಿ ನೀಡಲಾಗಿದೆ.
ಇದರೊಂದಿಗೆ ಪ್ರಧಾನಿ ಮೋದಿಗೆ ಒಟ್ಟು 28 ಅಂತರರಾಷ್ಟ್ರೀಯ ಗೌರವಗಳು ಸಿಕ್ಕಂತಾಗಿದೆ.
ಏನಿದು ಗ್ರೇಟ್ ಆನರ್ ನಿಶಾನ್?
ಗ್ರೇಟ್ ಆನರ್ ನಿಶಾನ್ ಎಂಬುದು ಇಥಿಯೋಪಿಯಾದ ಅತ್ಯಂತ ಪ್ರತಿಷ್ಠಿತ ನಾಗರಿಕ ಗೌರವವಾಗಿದೆ. ಇದರ ಇತಿಹಾಸವು 140 ವರ್ಷಗಳಿಗೂ ಹಿಂದಕ್ಕೆ ಹೋಗುತ್ತದೆ. 1884-85ರಲ್ಲಿ ಇಥಿಯೋಪಿಯಾದ ಚಕ್ರವರ್ತಿ ಮೆನೆಲಿಕ್ ದ್ವಿತೀಯರು ಈ ಗೌರವವನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಇದನ್ನು ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಥಿಯೋಪಿಯಾ ಎಂದು ಕರೆಯಲಾಗುತ್ತಿತ್ತು. ಇದು ಇಥಿಯೋಪಿಯನ್ ಸಾಮ್ರಾಜ್ಯದ ವೈಭವ, ಗೌರವ ಮತ್ತು ಅಂತರರಾಷ್ಟ್ರೀಯ ಸ್ನೇಹದ ಸಂಕೇತವಾಗಿದೆ.
ಮೋದಿಗೆ 28ನೇ ಅಂತರರಾಷ್ಟ್ರೀಯ ಗೌರವ:
ಇಥಿಯೋಪಿಯಾದ ಗ್ರೇಟ್ ಆನರ್ ನಿಶಾನ್ ಪ್ರಶಸ್ತಿಯೊಂದಿಗೆ, ಪ್ರಧಾನಿ ಮೋದಿ ಈಗ ವಿಶ್ವದ ವಿವಿಧ ರಾಷ್ಟ್ರಗಳಿಂದ 28 ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದಿದ್ದಾರೆ. ಪಪುವಾ ನ್ಯೂಗಿನಿಯಾ, ಫಿಜಿ, ಪಲಾವ್, ಈಜಿಪ್ಟ್, ಫ್ರಾನ್ಸ್, ನಮೀಬಿಯಾ, ಬ್ರೆಜಿಲ್ ಸೇರಿದಂತೆ ಹಲವಾರು ದೇಶಗಳು ಕಳೆದ ಕೆಲವು ವರ್ಷಗಳಲ್ಲಿ ಅವರಿಗೆ ತಮ್ಮ ಅತ್ಯುನ್ನತ ಗೌರವಗಳನ್ನು ನೀಡಿ ಗೌರವಿಸಿದ್ದು, ಇದು ಭಾರತದ ವಿದೇಶಾಂಗ ನೀತಿಯ ಯಶಸ್ಸಿನ ಪ್ರತಿಬಿಂಬವಾಗಿಯೂ ಕಾಣುತ್ತದೆ.