ಸಂತಾಲಿ ಭಾಷೆಯ ಸಂವಿಧಾನ ಪ್ರತಿ ಬಿಡುಗಡೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂತಾಲಿ ಭಾಷೆಯಲ್ಲಿ ಸಿದ್ಧಪಡಿಸಲಾದ ಭಾರತದ ಸಂವಿಧಾನದ ಪ್ರತಿಯನ್ನು ಬಿಡುಗಡೆ ಮಾಡಿದರು.
ಸಂತಾಲಿ ಭಾಷೆಯ 'ಒಲ್ ಚಿಕಿ' ಲಿಪಿಯಲ್ಲಿ ಸಂವಿಧಾನ ಪ್ರತಿ ಲಭ್ಯವಾಗಿದೆ.
*ಸಂತಾಲಿ ಭಾಷೆ* :
ಸಂತಾಲ ಬುಡಕಟ್ಟು ಜನರ ಭಾಷೆ.
ಭಾರತದ ಸಂವಿಧಾನದ 92ನೇ ತಿದ್ದುಪಡಿ ಕಾಯಿದೆ-2003ರಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಈ ಭಾಷೆಯು ಸೇರಿದೆ.
ಜಾರ್ಖಂಡ್ ರಾಜ್ಯವು ಈ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಿದೆ.
ಲಿಪಿ : ಓಲ್ ಚಿಕಿ
ಲಿಪಿ ರಚನೆ : ಪಂಡಿತ್ ರಘುನಾಥ್ ಮುರ್ಮು
ಈ ಭಾಷೆಯು ಮುಖ್ಯವಾಗಿ ಅಸ್ಸಾಂ, ಬಿಹಾರ, ಜಾರ್ಖಂಡ್, ಮಿಜೋರಾಂ, ಒರಿಸ್ಸಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳ ಗಳಲ್ಲಿ ಮಾತನಾಡಲ್ಪಡುತ್ತದೆ.
ಭಾರತದ ಸಂವಿಧಾನದ 92ನೇ ತಿದ್ದುಪಡಿ ಕಾಯಿದೆ - 2003
ಭಾರತದ ಸಂವಿಧಾನದ 8ನೇ ಅನುಸೂಚಿಗೆ ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಸೇರಿಸಲಾಗಿದೆ.